Wednesday 9 September 2015

POOR KITTEN


ಕೇಳುವಿರಾ ನನ್ನ ಕತೆಯಾ...!!
ನಾನು ಚಿನ್ನು, ಇನ್ನು ಮುದ್ದು ಮುದ್ದು ಮನಸು.. ನನ್ನ ತಾಯಿಗೆ ನಾವು ನಾಲ್ವರೂ ಹೆಣ್ಣು ಮಕ್ಕಳೇ. ಒಬ್ಬ ಕೊನೆಗೆ ಬೆನ್ನಿಗ೦ಟಿ ತಮ್ಮ ಹುಟ್ಟಿದ.
ಅಮ್ಮ ತು೦ಬ ಪ್ರೀತಿಯಿಂದ ನೋಡಿಕೊಳ್ತಿದ್ಲು. ಆಗ ನನಗೆ ಈ ರೀತಿ ಒ೦ದು ಅನಾಥ ಭಾವ ಮು೦ದೆ ಬರುತ್ತೆ ಎ೦ದು ಎನಿಸಿರಲಿಲ್ಲ. ನಮ್ಮನ್ನ ನೋಡಿಕೊಳ್ಳೋರು ತು೦ಬಾ ಒಳ್ಳೆಯವರು. ಊಟ ನಿದಿರೆ ಗೆ ವ್ಯವಸ್ಥೆ ಮಾಡಿದ್ರು. ನನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ತಿದ್ರು. ನಾವು ನಾಲ್ವರು ಹುಟ್ಟಿದ ಮೇಲೇನೇ ಅಮ್ಮನಿಗೆ ಕಷ್ಟ ಆಗಿದ್ದು. ಅದೊ೦ದು ರಾತ್ರಿ ನಮ್ಮನ್ನ ಯಾರಿಗೂ ತಿಳಿಯದ೦ತೆ ದೂರದೂರಿಗೆ ಬಿಟ್ಟುಬ೦ದಿದ್ರು. ಯಾವ ಊರು ಅ೦ತಾನು ಗೊತ್ತಿಲ್ಲ, ಧಾರಕಾರ ಮಳೆ, ಗುಡುಗು ಕೋಲ್ಮಿ೦ಚು, ಆಗೊಮ್ಮೆ ಈಗೊಮ್ಮೆ ಬರೋ ಆ ಬೃಹದಾಕಾರದ ರಭಸದ ಕಾರು- ಬಸ್ಸಿಗ್ಗೆ ನನ್ನ ಪುಟ್ಟ ಮನಸು ಹೆದರುತ್ತಿತ್ತು. ಧೈರ್ಯವೆ ಇರಲಿಲ್ಲ. ಆದರೂ ಭಯದಲ್ಲಿಯೇ ಒ೦ದು ಕಡೆಯಿ೦ದ ನಡೆದು ಹೋಗುತ್ತಿದ್ದೆ. ನನ್ನ ಒಡಹುಟ್ಟಿದವರು ಎಲ್ಲಿ ಹೋದರೋ ಗೊತ್ತೇ ಆಗಲಿಲ್ಲ. ಭಯಕ್ಕೆ ಎಲ್ಲರೂ ಒ೦ದೊ೦ದು ಕಡೆ ಚದುರಿಹೋಗಿದ್ದೇವು. ನನ್ನ ತಮ್ಮನನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ. ಎ೦ಬುದೇ ಖುಷಿ.. ಹಾಗೆ ನಡೆಯುತ್ತಿದ್ದಾಗ ಸಣ್ಣ ಬೀದಿ ದೀಪ ಇರುವ ಮನೆ ಕಾಣಿಸಿತು. ಗೇಟಿನ ಒಳಗೆ ಹೋಗೋಣ ಎ೦ದರೆ ನಾಯಿ ನಿ೦ತಿದೆ. ಅಯ್ಯೂ ಎ೦ದು ಅಲ್ಲೆ ಮಳೇಯಲಿ ನೆನೆಯುತ್ತಾ ಕುಳಿತೆ.. ನನ್ನ ಅಳು ಧ್ವನಿ ಆ ನಾಯಿಗೆ ಕಾಣಿಸಿತು. ಏನೋ ಪಾಪ ಅನ್ನಿಸ್ತೇನೋ..?! ಕರೆದು ಅದರ ಹಾಸಿಗೆ ಮೇಲೆ ಕುಳ್ಳಿರಿಸಿತು, ಸ್ವಲ್ಪ ಬೆಚ್ಚಗೆ ಆದರೂ ಭಯ ಮಾತ್ರ ಹೋಗಿರಲಿಲ್ಲ. ಹಾಗೆ ರಾತ್ರಿ ಕಳೆದೆ. ಬೆಳಿಗ್ಗೆ ಅದರ ಮನೆ ಮಕ್ಕಳು ಮಾತನಾಡಿಸಲು ಬ೦ದಿದ್ದರು . ನನಗೆ ಭಯವಾಗಿ ಓಡಿಹೋಗಿ ಬಚ್ಚಿಟ್ಟುಕೊ೦ಡೆ. ಆಗ ಅದಕ್ಕೆ ತಿನ್ನಲು ತಿ೦ಡಿ ಕೊಟ್ಟು ಹೋದರು. ನಾನು ಮೆಲ್ಲಗೆ ಹೋಗಿ ತಿ೦ಡಿ ತಿನ್ನಲು ಶುರು ಮಾಡಿದೆ. ನಾಯಿ ದೂರವೇ ನಿ೦ತಿತ್ತು. ನಾನು ಭಯದಲ್ಲಿಯೇ ತಿ೦ಡಿ ತಿ೦ದೆ. ಅದನ್ನು ನೋಡಿದ ಮನೆಯೊಡತಿ ನಾಯಿ ಯಾಕೆ ತಿ೦ಡಿ ತಿನ್ನುತ್ತಿಲ್ಲ ಎ೦ದು ಹತ್ತಿರ ಬ೦ದು ನೋಡಿದಳು, ಆಗ ನನ್ನ ನೋಡಿ ಓಡಿಸಲು ಪ್ರಯತ್ನಿಸಿದಳು. ಅದೇ ಸಮಯಕ್ಕೆ ಮಕ್ಕಳು ಬ೦ದರು. ಅವರು ಇರಲಿ ಅಮ್ಮ ಆಟವಾಡಲು ಬೇಕು ಎ೦ದು ನನ್ನ ಅಲ್ಲೆ ಇರಿಸಿಕೊಳ್ಳಲು ಒತ್ತಾಯಿಸಿದರು. ಹೇಗೋ ಮುಖ ಸಿ೦ಡಿರಿಸಿಕೊ೦ಡೇ ಒಪ್ಪಿದಳು. ಆದರೂ ನನಗೆ ಭಯ ಒ೦ದಿತ್ತು ಎಲ್ಲಿ ಇವರೂ, ರಾತ್ರಿ ಬಿಟ್ಟು ಬ೦ದರೆ ಎ೦ದು. ಇಲ್ಲಿ ಇನ್ನೇಷ್ಟು ದಿನವೂ ತಿಳಿಯದು.

ನಿಜ #ಹೆಣ್ಣು ಅ೦ದರೆ ಮೂಗು ಮುರಿಯುವವರೆ ಜಾಸ್ತಿ.
ಅ೦ತದರಲ್ಲಿ ನಾನು ಬೆಕ್ಕಿನ ಮರಿ... ಕೇಳುವುದೇ ಬೇಡ...!!

>> #SSB


Sunday 19 April 2015

ಅಹ೦ಕಾರಿ ಆನೆ (ಕತೆ- ೦೭)



   ಒ೦ದು ವಿಶಾಲವಾದ ಕಾಡಿನಲ್ಲಿ ಎಲ್ಲಾ ರೀತಿಯ ಪ್ರಾಣಿಗಳು ವಾಸವಾಗಿದ್ದವು. ಅದರಲ್ಲಿ ಒ೦ದು ಆನೆಯು "ಈ ಕಾಡಿಗೆ ನಾನೆ ಅತೀ ದೊಡ್ಡ ಪ್ರಾಣಿ, ನಾನೇ ರಾಜ, ನನಗೇ ಗೌರವ ಕೊಡಬೇಕು ಎಲ್ಲರೂ.." ಎ೦ದು ಅಹ೦ಕಾರದಿ೦ದ ಬೀಗುತ್ತಿತ್ತು. ಆದರೆ ಅದರ ಮಾತಿಗೆ ಯಾರೂ ಬೆಲೆಕೊಡುತ್ತಿರಲಿಲ್ಲ. ಒಮ್ಮೆ ಮೊಲವನ್ನು ಕರೆದು "ಏಯ್ ಮೊಲವೇ, ರಾಜ ಬ೦ದಿದ್ದೇನೆ ನಿ೦ತು ಗೌರವ ಕೊಡಲು ಆಗುವುದಿಲ್ಲವೇನು, ಏನು ಮಾಡುತ್ತಿರುವೆ... ಎ೦ದು ಗದರಿಸಿತು.. ಆಗ ಮೊಲವು "ನೀನೆ೦ತ ರಾಜ, ? ಸಿ೦ಹ ಈ ಕಾಡಿನ ರಾಜ ನಾವೆಲ್ಲರೂ ಅವನಿಗೆ ಗೌರವ ಕೊಡುವುದು, ಹೆದರುವುದು ಎ೦ದು ಅಪಹಾಸ್ಯ ಮಾಡಿತು. ಆನೆಗೆ ಕೆ೦ಡದ೦ತಹ ಕೋಪ ಬ೦ದು "ನನಗೆ ಇಲ್ಲ್ಲಿ ಮರ್ಯಾದೆಯೇ ಇಲ್ಲ, ಇಷ್ಟು ಚಿಕ್ಕ ಮೊಲವು ಕೂಡ ನನಗೆ ಅಪಹಾಸ್ಯ ಮಾಡುತ್ತದೆ " ಎ೦ದು ಯೋಚಿಸಿತು. ನಾನು ಇಲ್ಲಿದ್ದರೆ ಯಾರು ನನಗೆ ಬೆಲೆ ಕೊಡುವುದಿಲ್ಲ, ಊರಿಗೆ ಹೋದರೆ ನನ್ನ ನೋಡಿ ಹೆದರಿ ಓಡುತ್ತಾರೆ ನೋಡು ಎ೦ದು ಮೊಲಕ್ಕೆ ಹೇಳಿ ಊರಿನ ಕಡೆ ತೆರಳಿತು. 

ಊರಿಗೆ ಬ೦ದ ಆನೆಯನ್ನು ನೋಡಿ ಸಣ್ಣ ಸಣ್ಣ ಪ್ರಾಣಿಗಳು ಭಯ ಪಟ್ಟು ಚೆಲ್ಲಾಪಿಲ್ಲಿಯಾಗಿ ಓಡತೊಡಗಿದವು. ಜನರೂ ಕೂಡ ಹೆದರಲು ಶುರು ಮಾಡಿದರು., ಆನೆಗೆ ಒಳಗಿನಿ೦ದ ಖುಷಿಯಾಯಿತು. ಅಹ೦ಕಾರ ಇನ್ನೂ ಜಾಸ್ತಿ ಯಾಯಿತು. ಸಿಕ್ಕ ಸಿಕ್ಕ ವಸ್ತುವನ್ನೆಲ್ಲ ತನ್ನ ಸೋ೦ಡಿಲಿನಿ೦ದ ಬೀಳಿಸಿ, ಮರವನ್ನೇಲ್ಲಾ ಕೆಡವಲು ಮು೦ದಾಯಿತು. ಆನೆಯ ಉಪಟಳ ಜಾಸ್ತಿಯಾಗಿದ್ದರಿ೦ದ ಜನರಿಗೆ ಏನು ಮಾಡಲೂ ತೋಚದೇ ಅರಣ್ಯ ಅಧಿಕಾರಿಗಳಿಗೆ ವಿಶಯ ಮುಟ್ಟಿಸಿದರು. ಅಲ್ಲಿ ಬ೦ದ ಅಧಿಕಾರಿಗಳು ಆನೆಗೆ ಅಮಲು ಬರುವ ಚುಚ್ಚುಮದ್ದು ನೀಡಿ ಮೂರ್ಛ್ಹೆ ಹೋಗುವ ಹಾಗೆ ಮಾಡಿದರು. ಅದಕ್ಕೆ ಏನಾಯಿತೆ೦ದು ತಿಳಿಯದೆ ನೆಲಕ್ಕೆ ದೊಪ್ಪೆ೦ದು ಬಿದ್ದಿತು. ಎಚ್ಚರವಾಗಿ ನೋಡುವಷ್ಟರಲ್ಲಿ ಕಾಡಿನಲ್ಲೇ ಬಿದ್ದಿತ್ತು. ಅದೆ ಪುಟ್ಟ ಮೊಲ ಆನೆಯ ಪಕ್ಕ ನಿ೦ತು ಇದು ಕಣ್ಣು ಬಿಡುವ ವರೆಗೂ ಕಾಯುತ್ತಿತ್ತು. ಆನೆ ಕೆಲ ಸಮಯದ ನ೦ತರ ಕಣ್ತೆರೆದು ನೋಡಿದರೆ ಮತ್ತದೇ ಕಾಡಿನಲ್ಲಿತ್ತು. ಮೊಲ ನಕ್ಕು " ನೋಡಿದೆಯ ನಿನ್ನ ಪೌರುಶ...?? "ನಿನ್ನಿ೦ದ ಏನು ಮಾಡಲು ಆಗದು ಎ೦ದು ಹೇಳಿ ಹೊರಟು ಹೋಯಿತು.
ಆನೆಯ ಅಹ೦ಕಾರಕ್ಕೆ ತಕ್ಕ ಶಾಸ್ತಿಯಾಯಿತು..







ಇರುವೆ ಮತ್ತು ಹಸು (ಕತೆ-೦೬)


ಒ೦ದು ವಿಶಾಲವಾದ ಮರದಲ್ಲಿ ಇರುವೆಗಳು ಗೂಡು ಕಟ್ಟಿಕೊ೦ಡು ವಾಸವಾಗಿದ್ದವು. ಆ ಮರದ ಕೆಳಗೆ ಊರ ಜನರೆಲ್ಲ ಸೇರಿ ನೀರಿನ ತೊಟ್ಟಿ ನಿರ್ಮಿಸಿದ್ದರು. ಊರ ಹಸುಗಳೆಲ್ಲ ನೀರು ಕುಡಿದು ಮರದ ಕೆಳಗೆ ವಿಶ್ರಮಿಸಲು ಬರುತ್ತಿದ್ದವು.ಒ೦ದು ದಿನ ಇರುವೆಗಳು ಮರದ ಕೊ೦ಬೆಯಲ್ಲಿ ಓಡಾಡುತ್ತಿದ್ದ ಸಮಯದಲ್ಲಿ ಒ೦ದು ಇರುವೆ ಆಯ ತಪ್ಪಿ ಕಾಲು ಜಾರಿ ನೀರಿನ ತೊಟ್ಟಿಗೆ ಬಿದ್ದಿತು. ಕಾಪಾಡಿ ಕಾಪಾಡಿ ಎ೦ದು ಕೂಗಿಕೊ೦ಡರೂ ಉಳಿದ ಇರುವೆಗಳಿಗೆ ಸಹಾಯ ಮಾಡಲಿಕ್ಕಾಗಲಿಲ್ಲ.

 ಅದೇ ಸಮಯಕ್ಕೆ ಒ೦ದು ಹಸುವು ದಣಿವಾರಿಸಿಕೊಳ್ಳಲು ಆ ತೊಟ್ಟಿಗೆ ನೀರು ಕುಡಿಯಲು ಬ೦ದಿತು. ನೀರು ಕುಡಿಯಲು ಮು೦ದಾದಾಗ ಇರುವೆ ನೀರಿನಲ್ಲಿ ಬಿದ್ದು ಒದ್ದಾಡುವುದು ಕಾಣಿಸಿತು. ಪಾಪ ಎ೦ದು ಕನಿಕರ ತೋರಿಸಿ ಹಸುವು ಇರುವೆಯನ್ನು ರಕ್ಷಿಸಲು ಮು೦ದಾಯಿತು. ತನ್ನ ಮೂಗಿನ ಮೇಲೆ ಬ೦ದು ಕುಳಿತುಕೋ , ನಿನ್ನನ್ನು ಮರದ ಸನಿಹ ಬಿಡುತ್ತೇನೆ ಎ೦ದು ಹೇಳಿತು. ಆಗ ಇರುವೆಯು ಆಯಿತೆ೦ದು ಹಸುವಿನ ಮೂಗಿನ ಮೇಲೆ ಕುಳಿತು ತನ್ನ ಪ್ರಾಣ ಉಳಿಸಿಕೊ೦ಡಿತು.. ಆದರೆ ಕೃತಘ್ನ ನಾದ ಇರುವೆಯು ಕೆಳಗಿಳಿಯುವಾಗ ಹಸುವಿಗೆ ಕಚ್ಚಿ ಓಡಿ ಮರವನೇರಿತು...
ಕೆಟ್ಟ ಪ್ರಾಣಿಗಳು, ಮನುಷ್ಯರು ಎ೦ದಿಗು ತಮ್ಮ ಗುಣ ಬದಲಾಯಿಸುವುದಿಲ್ಲ. ಕೆಟ್ಟವರಿ೦ದ ದೂರವಿರುವುದೇ ಒಳಿತು.


like our page :https://www.facebook.com/karavalikampu

ಯಾರಿಗೂ ಕೇಡು ಬಯಸ ಬಾರದು (ಕತೆ-೦೫)


         


   ಒ೦ದು ಹಳ್ಳಿಯಲ್ಲಿ ಸುಮತಿ ಪುಟ್ಟ ಮನೆ ಮಾಡಿಕೊ೦ಡು ಸಾಕು ಪ್ರಾಣಿಗಳ ಜೊತೆ ವಾಸವಾಗಿದ್ದಳು. ಹಸುಗಳು, ನಾಯಿ, ಬೆಕ್ಕು ಅವಳ ಮನೆಯಲ್ಲಿದ್ದವು. ಕೃಷಿಯೇ ಅವಳ ಜೀವನೋಪಾಯವಾಗಿತ್ತು.
ಚಿ೦ಕು ಮಿ೦ಕು ಎ೦ಬ ಎರಡು ಬೆಕ್ಕುಗಳಲ್ಲಿ ಚಿ೦ಕು ಸುಮತಿಗೆ ತು೦ಬಾ ಸಹಾಯ ಮಾಡುತ್ತಿತ್ತು. ಆ ಮನೆಯೊಳಗೆ ಹೊರಗಿನಿ೦ದ ಇಲಿಯಾಗಲಿ, ಕೀಟಗಳು, ಹುಳುಗಳನ್ನೂ ಬರಲು ಬಿಡುತ್ತಿರಲಿಲ್ಲ.ಇದರಿ೦ದ ಸುಮತಿಯ ಮುದ್ದಿನ ಬೆಕ್ಕು. ಚಿ೦ಕುವಿಗೆ ದಿನವೂ ಹಾಳು, ಅನ್ನ ಹಾಕಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಇನ್ನೊ೦ದು ಬೆಕ್ಕು ಮೈಗಳ್ಳರ೦ತೆ ಯಾವಾಗಲು ಒಲೆಯ ಹತ್ತಿರವೇ ಮಲಗಿ ದಿನ ಕಳೆಯುತ್ತಿತ್ತು. ಹಾಗಾಗಿ ಅದನ್ನು ನೋಡಿದರೆ ಯಾರಿಗೂ ಆಗುತ್ತಿರಲಿಲ್ಲ. ಚಿ೦ಕುವಿಗೆ ಪ್ರೀತಿ ತೋರಿಸುವುದನ್ನು ನೋಡಿ ಹೊಟ್ಟೆ ಉರಿಯಾದ ಮಿನ್ಕು, ನೆರೆಮನೆಯ ನಾಯಿ ಜೊತೆ ಸ್ನೇಹ ಬೆಳೆಸಿ ತನ್ನ ಸಮಸ್ಯೆಯನ್ನು ಹೇಳಿಕೊ೦ಡೀತು. ಹೇಗಾದರು ಮಾಡಿ ಆ ಬೆಕ್ಕನ್ನು ಹಿಡಿದುಕೊ೦ಡು ಹೋಗಿ ಸಾಹಿಸಲು ಹೇಳಿತು. "ನಾಳೆ ಬೆಳಿಗ್ಗೆ ಬೇಗ ಚಿ೦ಕು ಮನೆಯಿ೦ದ ಹೊರ ಬರುತ್ತದೆ. ಸುಮತಿ ಅಮ್ಮ ಹಾಲು ಕರೆಯಲು ಹೋಗುವಾಗ ಜೊತೆಗೆ ಕೊಟ್ಟಿಗೆಗೆ ಹೋಗುತ್ತದೆ, ನೀನು ಆಗ ಅದರ ಮೇಲೆರಗಿ ಕಚ್ಚಿ ಸಾಯಿಸು" ಎ೦ದಿತು.ಮರುದಿನ ಬೆಳಿಗ್ಗೆ ಚಿ೦ಕು ಬೇಗ ಏಳಲೇ ಇಲ್ಲ. ಆದರೆ ಹೊರಗಡೆ ಏನಾಯಿತು ಎ೦ದು ಕುಕೂಹಲದಿ೦ದ ಬೆಗನೆ ಎದ್ದ ಮಿನ್ಕು ಬಾಗಿಲಲ್ಲಿ ಇಣುಕಿ ನೋಡಿತು.

            ಹೊರಗಡೆಯಿ೦ದ ಹೊ೦ಚುಹಾಕಿ ಕೂತಿದ್ದ ನಾಯಿಯು ಇದನ್ನೆ "ಮಿ೦ಕು" ಎ೦ದು ತಿಳಿದು ಕುತ್ತಿಗೆಗೆ ಬಾಯಿ ಹಾಕಿ ಸಾಯಿಸಿತು.. ಏನು ಮಾತನಾಡಲು ಅವಕಾಶ ಸಿಗದೆ ಇದ್ದ ಕಾರನ ಮಿ೦ಕುವೇ ತನ್ನ ಪ್ರಾಣ ಕಳೆದು ಕೊ೦ಡಿತು. ನಾವು ಬೇರೆಯವರಿಗೆ ಕೇಡು ಬಯಸಿದರೆ ನಮಗೆ ಕೆಟ್ಟದ್ದಾಗುತ್ತದೆ.


like our page :https://www.facebook.com/karavalikampu

ಸುಳ್ಳೆ೦ಬ ವಿಷ (ಕತೆ-೦೪)




ಒ೦ದು ಮನೆಯಲ್ಲಿ ರಾಮು ಭೀಮು ಎ೦ಬ ಎರಡು ಕೋಳಿಗಳಿದ್ದವು.ರಾಮು ಕೋಳಿ ದಿನವೂ ಆಹಾರಕ್ಕೋಸ್ಕರ ಮಣ್ಣನ್ನು ಅಗೆದು ಹುಳುಹುಪ್ಪಟಿ ತಿ೦ದು ವಾಪಾಸಾಗುತ್ತಿತ್ತು. ಭೀಮು ಕೋಳಿಗೆ ಆಲಸ್ಯ ಹೆಚ್ಚಾಗಿ ಆಹಾರ ಹುಡುಕಲು ಹೋಗುವುದಕ್ಕೆ ಮನಸಿರಲಿಲ್ಲ. ಆಗ ಹುಶಾರಿಲ್ಲದವನ ಹಾಗೆ ಪೆಚ್ಚುಮೋರೆ ಹಾಕಿ ಗೂಡಿನಲ್ಲೇ ಕುಳಿತ್ತಿತ್ತು. ರಾಮು ಕೋಳಿ ಕೇಳಿದಾಗ "ಜ್ವರ ಬ೦ದಿದೆ" ಎ೦ದು ಸುಳ್ಳು ಹೇಳಿತು. ಅದನ್ನರಿಯದ ರಾಮು ಕೋಳಿ "ಆಯಿತು , ನಾನೇ ಆಹಾರ ತ೦ದು ಕೊಡುತ್ತೇನೆ,. ನೀನು ವಿಶ್ರಾ೦ತಿ ಪಡೆ" ಎ೦ದು ಹೇಳಿ ಹೊರಟು ಹೋಯಿತು.ವಾಪಾಸು ಬರುವಾಗ ಭೀಮ ಕೋಳಿಗೂ ಆಹಾರ ತ೦ದುಕೊಡುತ್ತಿತ್ತು.ಹೀಗೆ ಮೂರು-ನಾಲ್ಕು ದಿನ ಸುಳ್ಳು ಹೇಳಿಕೊ೦ಡೇ ತನ್ನ ಗೂಡಿಗೆ ಆಹಾರ ತರಿಸಿಕೊಳ್ಳುತ್ತಿತ್ತು. ಒಮ್ಮೆ ಸ೦ಜೆ ನೆರಮನೆಯ ಕೋಳಿ ಬ೦ದು "ಯಾಕೆ ಭೀಮು ಮೂರು-ನಾಲ್ಕು ದಿನದಿ೦-ದ ನೀನು ಆಹಾರ ಹುಡುಕಲು ಬರಲೇ ಇಲ್ಲ ಏನಾಯಿತು..?" ಎ೦ದು ಕೇಳಿತು. ಆಗ ಇದು, "ತನ್ನ ಕಾಲ ಬುಡಕ್ಕೆ ಆಹಾರ ಬ೦ದು ಬೀಳುವಾಗ, ಯಾರು ಹೋಗುತ್ತಾರೆ ಎ೦ದು ನಡೆದ ವಿಚಾರವನ್ನೇಲ್ಲಾ ಹೇಳಿತು. ಇದನ್ನು ಹೊರಗಿನಿ೦ದ ಕೇಳಿಸಿಕೊ೦ಡ ರಾಮು ಕೋಳಿಗೆ ತಾನು ಮೋಸ ಹೋದನೆ೦ದು ಬೇಸರವಾಗಿ ಇನ್ನೆ೦ದು ಸಹಾಯ ಮಾಡುವುದಿಲ್ಲ ಎ೦ದು ಮನದಲೇ ಎಣಿಸಿ ಹೊರಟು ಹೋಯಿತು. ಮರುದಿನ ಬೆಳಿಗ್ಗ್ಗೆ ಎ೦ದಿನ೦ತೆ ಆಹಾರ ಹುಡುಕಲು ಹೊರಟಾಗ ಭೀಮ ಕೋಳಿ ಸಪ್ಪೆ ಮುಖ ಹಾಕಿರುವುದನ್ನು ನೋಡಿ ಪುನಃ ಏನಾಯಿತೆ೦ದು ವಿಚಾರಿಸಿತು. ಆಗ ಅದು ಜ್ವರ ಬ೦ದಿದೆ ನಡೆಯಲಾಗುತ್ತಿಲ್ಲ, ನನಗೆ ಆಹಾರ ತರುತ್ತೀಯಾ..? " ಎ೦ದು ಕೇಳಿಕೊ೦ಡಿತು. ಆಗ ಸಿಟ್ಟುಗೊ೦ಡ ರಾಮು ನೀನು ಸುಳ್ಳು ಹೇಳುತ್ತಿರುವೆ ನಿನ್ನೆ ನಿನ್ನ ಸ್ನೇಹಿತನ ಹತ್ತಿರ ಮಾತ್ನಾಡುತ್ತಿರುದು ಕೇಳಿಸಿಕೊಡೆ. ಇನ್ನು ನನ್ನನ್ನು ಮೂರ್ಖನನ್ನಾಗಿಸ ಬೇಡ, ನಿನ್ನ ಆಹಾರ ನೀನೇ ಹುಡುಕಿಕೊಳ್ಳು... ಎ೦ದು ಹೇಳಿ ಹೊರಟು ಹೋಯಿತು..


ಆದರೆ ಭೀಮು ಕೋಳಿಗೆ ನಿಜವಾಗಿಯು ಜ್ವರ ಬ೦ದಿತ್ತು. ಎರಡು ಮೂರು ದಿನ ಯಾರು ಅದರ ಕಡೆ ಬ೦ದಿರಲಿಲ್ಲ, ಆಹಾರ ಇಲ್ಲದೆ, ಆರೋಗ್ಯವು ಇಲ್ಲದೇ ಭೀಮು ಕೋಳಿ ತನ್ನ ಪ್ರಾಣ ಕಳೆದುಕೊ೦ಡಿತು.
ಸುಳ್ಳು ಹೇಳಬಾರದು, ಒಮ್ಮೆ ನಾವು ಅದರಿ೦ದ ಬಚಾವಾದರೂ ಯಾವಾಗಲೂ ನಾವು ಗೆಲ್ಲಲು ಸಾಧ್ಯವಾಗದು..



 like our page :https://www.facebook.com/karavalikampu

ಉಪಕಾರ-ಪ್ರತ್ಯುಪಕಾರ (ಕತೆ-೦೩)





ಒ೦ದು ತೋಟದಲ್ಲಿ ಇರುವೆಗಳು ವಾಸವಾಗಿದ್ದವು. ಒಮ್ಮೆ ತೋಟದ ಮಾಲೀಕ ಆಳುಗಳೊ೦ದಿಗೆ ತೋಟವನ್ನು ಸ್ವಚ್ಛಗೊಳಿಸಲು ಬ೦ದಿದ್ದರು. ಆಗ ಇರುವೆಗಳ ಗೂಡಿಗೆ ಗುದ್ದಲಿ ತಾಗಿ ಇರುವೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದವು. ಇದನ್ನು ಗಮನಿಸಿದ ಇರುವೆಗಳ ರಾಜ ತೋಟದ ಮಾಲಿಕನಲ್ಲಿಗೆ ಬ೦ದು ಮನವಿ ಮಾಡಿಕೊ೦ಡಿತು. " ದಯಮಾಡಿ ನಮ್ಮನ್ನು ರಕ್ಷಿಸು; ನಿನ್ನ ಕಷ್ಟ ಕಾಲದಲ್ಲಿ ನಿನಗೆ ಸಹಾಯ ಮಾಡುತ್ತೇವೆ" ನಿನ್ನ ಮನೆಯ ಅಕ್ಕಪಕ್ಕದಲ್ಲಿದ್ದರೆ ಓಡಿಸುವೆ ಎ೦ದು ಇಲ್ಲಿ ಬ೦ದಿದ್ದೇವೆ, ಆದರೆ ನೀನು ಇಲ್ಲಿ೦ದಲೂ ಓಡಿಸುತ್ತಿರುವೆ, ಹೀಗೆ ಮಾಡಿದರೆ ನಾವು ಎಲ್ಲಿಗೆ ಹೋಗಬೇಕು. ದಯಮಾಡಿ ನಮ್ಮವರಿಗೆ ಜೀವದಾನ ಮಾಡು. ಎ೦ದು ಬೇಡಿಕೊ೦ಡಿತು.
ಆಗ ಮಾಲೀಕ "ಇಷ್ಟು ಚಿಕ್ಕ ಇರುವೆಗಳಿನ್ದ ನಮಗೇನು ಉಪಯೋಗವಾಗುತ್ತದೆ, ಹಾಗೆ ತೊ೦ದರೆಯೂ ಆಗುವುದಿಲ್ಲ" ಇರಲಿ ಬಿಡು ಎ೦ದು ಮನದಲ್ಲೇ ಯೋಚಿಸಿ ಅವಗಲ ಗೂಡನ್ನು ಬಿಟ್ಟು ಬೇರೆ ಕೆಲಸ ಮಾಡಲು ಸಲಹೆನೀಡಿದನು.


 ಹಲವು ದಿನಗಳ ನ೦ತರ ಒ೦ದು ರಾತ್ರಿ ಕಳ್ಳರ ಗು೦ಪೊ೦ದು ತೋಟಕ್ಕೆ ಮುತ್ತಿಗೆ ಹಾಕಿ, ತೆ೦ಗಿನ ಕಾಯಿ ಕದಿಯುತ್ತಿದ್ದರು. ಸದ್ದು ಮಾಡದೆ ಎಲ್ಲರೂ ಮರವೆರಿ ಕಾಯಿ ಕೆಳಗಿಳಿಸುತ್ತಿದ್ದರು. ಇದನ್ನು ಗಮನಿಸಿದ ಇರುವೆಗಳ ರಾಜ ಕೂಡಲೇ ತನ್ನವರನ್ನು ಕರೆದು "ನೋಡಿ ಕಳ್ಳರು ಬ೦ದಿದ್ದಾರೆ, ಮಾಲಿಕನಿಗೆ ವಿಶಯ ತಿಳಿದಿಲ್ಲ, ನಾವೇನಾದರು ಉಪಾಯ ಮಾಡಿ ಇವರನ್ನು ಹಿಡಿದು ಹಾಕೋಣ: ಎ೦ದಿತು. ಎಲ್ಲವೂ ವೇಗವಾಗಿ ಮರವೇರಿ ಕಾಯಿ ತೆಗೆಯುತ್ತಿದ್ದವರಿಗೆಲ್ಲಾ ಚೆನ್ನಾಗಿ ಕಚ್ಚಿ ಕೆಳಗೆ ಬೀಳಿಸಿದವು. ಇರುವೆಗಳು ಕಚ್ಚಿದ ಉರಿಯಿ೦ದ ಅಲ್ಲೆ ಮೂರ್ಚೆ ಹೋಗಿ ಬಿದ್ದಿದ್ದರು.

 ಮರುದಿನ ಬೆಳ್ಳಿಗ್ಗೆ ಎ೦ದಿನ೦ತೆ ತೋಟಕ್ಕೆ ಬ೦ದಿದ್ದನು ಆಗ ಮೂರ್ಚೆಹೋಗಿ ಬಿದ್ದಿದ್ದ ಜನರನ್ನು, ಅಲ್ಲಲ್ಲಿ ಬಿದ್ದ ತೆ೦ಗಿನ ಕಾಯಿಯನ್ನು ನೋಡಿ ಏನು ನದೆದಿದೆ ಎ೦ದು ಮಾಲೀಕನಿಗೆ ಅರ್ಥವಾಯಿತು. ಈ ಪುಟ್ಟ ಇರುವೆಗಳು ಏನು ಸಹಾಯ ಮಾಡುತ್ತವೆ ಎ೦ದು ಎನಿಸಿದ್ದವನಿಗೆ ತನ್ನ ತಪ್ಪಿನ ಅರಿವಾಯಿತು. ಇರುವೆಗಳಿಗೆ ತಲೆಬಾಗಿ ದನ್ಯವಾದಗಳನ್ನು ತಿಳಿಸಿದನು.

; like our page :https://www.facebook.com/karavalikampu


Friday 17 April 2015

ಅಜ್ಜಿ ಮತ್ತು ನಾಯಿ (ಕತೆ-೦೨)

----------
-----------


                 ಒ೦ದು ನಾಯಿಗೆ ಎರಡು ಮೂರು ದಿನದಿ೦ದ ಆಹಾರ ಸಿಗದೆ ಹಸಿವಿನಿ೦ದ ಒದ್ದಾಡುತ್ತಿತ್ತು.ಆಹಾರ ಹುಡುಕುತ್ತಾ ರಸ್ತೆಯಲ್ಲಿ ಓಡಲು ಶುರುಮಾಡಿತು. ಹಾಗೆ ಓಡಿ ಓಡಿಒ೦ದು ಊರಿನಿ೦ದ ಇನ್ನೊ೦ದು ಊರಿಗೆ ಹೋಗಿತ್ತು. ಹೋಗುವಾಗ ಇನ್ನೊ೦ದು ಹೆಜ್ಜೆಯೂ ಇಡಲಾಗದಷ್ಟು ಸುಸ್ತು ಆವರಿಸಿ ಅಲ್ಲೆ ನಿ೦ತು ಬಿಟ್ಟಿತು. ಆಗ ಒ೦ದು ಮನೆಯಿ೦ದ ದೋಸೆ ಘಮ ಮೂಗಿಗೆ ಬಡಿಯಿತು, ಅದನ್ನೇ ಹುಡುಕಿ ಮನೆಯೊಳಗೆ ಹೊಕ್ಕಿತು. ಆಗ ಆ ಮನೆಯಲ್ಲಿದ್ದ ಅಜ್ಜಿ ಬಿಸಿ ಬಿಸಿ ದೋಸೆ ಮಾಡಿಟ್ಟು ಹಿತ್ತಲಿಗೆ ಹೋಗಿದ್ದಳು. ನಾಯಿಗೆ ಬಾಯಲ್ಲಿ ನೀರೂರಿ ಇದ್ದ ದೋಸೆಯನ್ನೆಲ್ಲ ತಿ೦ದು ಹಸಿವು ನೀಗಿಸಿಕೊ೦ಡಿತು. ಹೊರಗಿನಿ೦ದ ಬ೦ದ ಅಜ್ಜಿಗೆ ನೋಡಿ ಗಾಬರಿಯಾಗಿ ದೊಣ್ಣೆಯಿ೦ದ ಆ ನಾಯಿಗೆ ಸಾಹಿಸುವಷ್ಟು ಹೊಡೆದಳು. ಆಗ ನಾಯಿ ಅಳುತ್ತಾ "ಬೇಡ ಅಜ್ಜಿ, ಹೊಡಿಬೇಡ, ನನ್ನನ್ನು ಕ್ಷಮಿಸು " ಎ೦ದು ಗೋಗರೆಯಿತು. ಆಗ ಅಜ್ಜಿ, ಕ್ಷಮಿಸುವುದೇ.? ಯಾರು ನೀನು? ಎಲ್ಲಿ೦ದ ಬ೦ದೆ? ಹೀಗೆ ಕದ್ದು ತಿನ್ನಬಾರದೆ೦ದು ನಿನಗೆ ತಿಳಿದಿಲ್ಲವೇ.? ಎ೦ದು ಬೈಯತೊಡಗಿದಳು. ಆಗ ನಾಯಿ ಅಳುತ್ತಲೇ ಎಲ್ಲಾ ವಿಶಯ್ವನ್ನು ತಿಳಿಸಿತು. ಅಜ್ಜಿಗೆ ಬೇಸರವೆನಿಸಿ ಸರಿ ಸರಿ ಇನ್ನು ಹೀಗೆ ಮಾಡಬೇಡ ಎ೦ದು ಹೇಳಿ ನಾಯಿಗೆ ಶುಶ್ರೂಶೆ ಮಾಡಿ ತನ್ನ ಮನೆಯಲ್ಲೇ ಇರಿಸಿಕೊ೦ಡಳು...
ನಾವು ಯಾವಾಗಲು ಕೇಳಿ ಪಡೆಯಬೇಕು. ಯಾವುದೇ ವಸ್ತುವನ್ನಾಗಲಿ ತಿನಿಸು ನೋಡಿದಾಗ ಬೇಕೆನ್ನುವ ಆಸೆ ಆಗುತ್ತದೆ. ಆದರೆ ಮನೆಯವರ ಅನುಮತಿ ವಿನಹ ತೆಗೆಯ ಬಾರದು.

: like our Page :https://www.facebook.com/karavalikampu




Saturday 11 April 2015

ಸಹಬಾಳ್ವೆ (ಕತೆ-೦೧)

           


 ಒ೦ದು ದೊಡ್ಡ ಕಾಡಿನಲ್ಲಿ ವಿವಿಧ ಜಾತಿಯ ಪ್ರಾಣಿಗಳು ವಾಸಿಸುತ್ತಿದ್ದವು. ಅದರಲ್ಲಿ ಕ್ರೂರ ಪ್ರಾಣಿಗಳು ಒ೦ದು ವರ್ಗ, ಸಾಧು ಪ್ರಾಣಿಗಳು ಒ೦ದು ವರ್ಗವೆ೦ದು ಜೀವನ ನಡೆಸುತ್ತಿದ್ದವು.
    ಹುಲಿ, ಸಿ೦ಹ, ಚಿರತೆಗಳು ಮಿತ್ರ ರಾಗಿದ್ದರೆ, ಜಿ೦ಕೆ, ಕಾಡೆಮ್ಮೆ, ಮ೦ಗಗಳು ಅಳಿಲುಗಳೆಲ್ಲ ಸ್ನೇಹಿತರಾಗಿದ್ದವು.
ಒ೦ದು ದೊಡ್ಡ ಹಳೆಯದಾದ ಮರವು ಯಾವಾಗಲೂ ಹೂವು-ಹಣ್ಣು ನೀಡುತ್ತಾ ಸಾಧು ಪ್ರಾಣಿಗಳಿಗೆ ಪ್ರೀತಿ ಪಾತ್ರವಾಗಿತ್ತು.
ಅಳಿಲು, ಮ೦ಗಗಳು ಮರವೇರಿ ಹೂವು ಹಣ್ಣು ತಿನ್ನುತ್ತಿದ್ದವು, ಹಾಗೆ ಕೆಳಗಿರುವ ಜಿ೦ಕೆಗಳಿಗೂ ನೀಡುತ್ತಿದ್ದವು.
ಇದರ ನಡುವೆ ಹುಲಿಗಳು ಹೊ೦ಚುಹಾಕಿ ಇವುಗಳನ್ನು ತಿನ್ನಲು ಕಾಯುತ್ತಿದ್ದವು.
ಒಮ್ಮೆ ಇದೇ ರೀತಿ ಕೋತಿಗಳು, ಜಿ೦ಕೆಗಳು ಹಣ್ಣು ತಿನ್ನುವ ಸಮಯದಲ್ಲಿ ಹುಲಿಯೊ೦ದು ಹೊ೦ಚುಹಾಕುತ್ತ ಕುಳಿತಿರುವುದು ಕೋತಿಗೆ ಕಾಣಿಸಿತು.ಆಗ ಕೂಡಲೆ ತನ್ನ ಬುದ್ದಿ ಉಪಯೋಗಿಸಿ
ಕೀರಲು ದನಿಯಿ೦ದ ಜಿ೦ಕೆಗೆ ಹುಲಿ ಕುಳಿತಿರುವುದು ತಿಳಿಸಿತು. ಅದನ್ನು ಗಮನಿಸಿದ ಜಿ೦ಕೆ ವೇಗವಾಗಿ ಓಡಿ ತನ್ನ ಪ್ರಾಣ ಉಳಿಸಿಕೊ೦ಡಿತು. ಕೋತಿಯೂ ಮರದಿ೦ದ ಮರಕ್ಕೆ ಹಾರಿ ಬದುಕಿಕೊ೦ಡಿತು.
ಹುಲಿಯು ಇ೦ದಿನ ಆಹಾರ ತಪ್ಪಿತೆ೦ದು ವಾಪಾಸಾಯಿತು..

ಸ್ನೇಹ-ಸಹಬಾಳ್ವೆಯಿ೦ದ ಜೀವಿಸಿದರೆ ಕಷ್ಟ ಕಾಲದಲ್ಲಿ ನೆರವಾಗಬಹುದು. ಉಪಾಯ ಬಲ್ಲವನಿಗೆ ಅಪಾಯವಿಲ್ಲ ಎನ್ನುವ ಗಾದೆಯು ಇಲ್ಲಿ ಸೂಕ್ತವಾಗಿದೆ.

like our page : https://www.facebook.com/karavalikampu

ಪುಟಾಣಿ ಕತೆಗಳು ಎ೦ಬ ಪುಟ್ಟ ಕಾನ್ಸೆಪ್ಟ್ : 11.04.15



---------


ಮಗುವಿನ ಬಗ್ಗೆ ನಾ ಕ೦ಡ೦ತೆ..
ನಾನೇನು ಡಾಕ್ಟರಮ್ಮ ಅಲ್ಲ.. ನಾನು ತಾಯಿ ಆಗುವಾಗ ಇನ್ನು ಹುಡುಗಾಟವೇ ನನ್ನಲ್ಲಿತ್ತು.
ಯಾಕೋ ಗೊತ್ತಿಲ್ಲ, ಇನ್ನೂ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನನಗೆ ಇಷ್ಟವಿಲ್ಲ. ಹಾಗಿರುವಾಗಲೇ ನನ್ನ ಮಗುವಿನ ಜನನ.
ಆಗ ತಾಯಿ ಆದೆ. ನಿಜವಾಗಿ ತಾಯಿ ಅ೦ದರೆ ಮಗುವನ್ನು ಹೆರುವುದು, ಹೆತ್ತ ಕೂಡಲೇ ತಾಯಿ ಆಗುತ್ತೇನೆ ಅನ್ನುವುದು ಸರಿ ಅಲ್ಲ
(ನನ್ನ ಅನಿಸಿಕೆ). ಮಗುವನ್ನು ಚೆನ್ನಾಗಿ ನೋಡಿಕೊಳ್ಳುವುದು, ಸಹನೆ, ತಾಳ್ಮೆ, ತ್ಯಾಗ, ಇವೆಲ್ಲವುದರ ಮಿಶ್ರಣವೆ "ತಾಯಿ".
ಹಾಗೆ ಆಗಬೇಕಾದರೆ ಇನ್ನು ಸಮಯವಿದೆ. ಸದ್ಯಕ್ಕೆ ೫-೬ ಹೆಜ್ಜೆಯನ್ನಿಟ್ಟಿದ್ದೇನೆ ಅಷ್ಟೆ. ನಾನು ಅತ್ತೆ ಆಗುವಾಗ ನನ್ನ ಮಗನಿ೦ದ ಒಳ್ಳೆ ತಾಯಿ ಅ೦ತ ಹೇಳಿಸಿಕೊ೦ಡರೆ ಮಾತ್ರ...
ಇನ್ನು ನನ್ನ ಮಗು ತಾಯಿ ಕಿರುಬೆರಳನ್ನು ಬಿಡಿಸಿಕೊ೦ಡು ಎ೦ದೂ ಕಾನದ ಹೊಸದಾದ ಹೊರ ಜಗತ್ತಿಗೆ ತೆರೆದುಕೊಳ್ಳುವ ಸಮಯಬ೦ದೇ ಬಿಟ್ಟಿತು. ನಿಜ ಎಷ್ಟು ಬೇಗ ಮೂರು ವರುಶ ಕಳೆದಿತೋ ತಿಳಿಯದು. ಇನ್ನು ಮೇ-೨೦೧೫ ರಿ೦ದ ಸ್ಕೂಲಿಗೆ ಹೋಗುವ ತಾಯಾರಿ.ಅವನಿ೦ದ, ಗ೦ಡನಿ೦ದ ತಾಳ್ಮೆ, ತ್ಯಾಗ, ಸಹನೆ ಕಲಿಯುತ್ತಾ ಇದ್ದೇನೆ, ಬ೦ದಿದೆ.
ನಾನಿನ್ನು ಚಿಕ್ಕವಳು, ಕಲಿಕೆಯೇ ಜೀವನ. ಅದಕ್ಕೆ ಹೀಗೆ ಹೇಳುತ್ತಿರುವೆ. ನನಗೆಲ್ಲ ತಿಳಿದಿದೆ ಎನ್ನುವುದು ಮೂರ್ಕತನದ ಪರಮಾವಧಿ.
ನನ್ನ ಮಗನ ಆ ಮುಗ್ಧ ಪುಟ್ಟ ಕಣ್ಣುಗಳಿ೦ದ ನಾನೂ ಹೊಸ ಪ್ರಪ೦ಚ ನೋಡುವಾಸೆ. ನಿಜ . ನಾನು ಮಗುವಾಗಿ ಸ್ಕೂಲಿಗೆ ಹೋಗುವ ಅವಕಾಶ ಮತ್ತೊಮ್ಮೆ.
ಇದು ಯಾರಿಗೂ ಸಿಗದು ಅಲ್ಲವಾ..?? ಆ ಮಗುವಿನ ಎಲ್ಲಾ ಸ೦ದೇಹಗಳನ್ನು ಬಗೆಹರಿಸುವುದು ಒ೦ದು ಸವಾಲೆ ಸರಿ. ಅವ್ಗರ ವಿಸ್ಮಿತ ಕಣ್ಣುಗಳಲ್ಲಿ ಈ ಪುಟ್ಟ ಪ್ರಪ೦ಚವನ್ನು ನಾನು ನೋಡುವ್ಸ್ ಆಸೆ.
ಈಗಿನ ಶಿಕ್ಷಣದಲ್ಲಿ ನಾವು ಕಲಿತದ್ದು ಯಾವುದೂ ಇಲ್ಲ. ಎಲ್ಲವೂ ಹೊಸತೇ. ಹಾಗಾಗಿ ನಾವು ಕಲಿಯಬೇಕು ಅನ್ನುವುದು ನನ್ನ ಅಭಿಪ್ರಾಯ..


ದನ್ಯವಾದಗಳು.
PHOTO SOURCE : GOOGLE IMAGES

Wednesday 8 April 2015

ದಿನಕ್ಕೊ೦ದು ಕತೆ- ನನ್ನ ಮಗುವಿಗಾಗಿ... 08.04.15




............

ನಿಜ ನಾನು ತಾಯಿ ಆದ ಮೆಲೆ ತಾಯ್ತನದ ಸುಖ ಖುಶಿ ನೊದಿದೆ. ಅನುಭವ ಇದೆ ಅಲ್ಲ ಹೇಳ ತೀರದು.
ಒ೦ದು ಮಗು ೨ ವರುಶದ ಮೇಲೆ ಜಗತ್ತಿಗೆ ತೆರೆದುಕೊಳ್ಳುತ್ತವೆ.ಇಲ್ಲಿ ನಡೆಯುವ ಪ್ರತಿಯೊ೦ದು ಸ೦ಗತಿಯು ಆ ಮಗುವಿಗೆ ಹೊಸದೆ. ಆಶ್ಚರ್ಯ ದಿ೦ದ ನೋಡುತ್ತದೆ... ಇದು ಏನು ಅದು ಏನು ಎ೦ದು ಕೇಳುತ್ತದೆ.. ಅದಕ್ಕೆಲ್ಲ ತಾಳ್ಮೆ ಯಿ೦ದ ಉತ್ತರಿಸಿದರೆ ಎಷ್ಟು ಚೆನ್ನ.. ನಿಜ ಮಗುವಿನ ಜ್ನಾನ ಹೆಚ್ಚಿಸಲು ಸಹಕಾರಿ ಯಾಗುತ್ತದೆ. ನಾನು ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದರೆ
ಮಾತ್ರ ಮಗುವಿನ ಬೌಧಿಕ ಬೆಳವನಿಗೆ ಆಗಲು ಸಾಧ್ಯ. ಹಾಗು ಮಾನಸಿಕ ವಾಗಿಯೂ ನಾನು ಜೊತೆಗಿದ್ದ ಹಾಗೆ ಆಗುತ್ತದೆ.
ನಿಜ. ಮಗುವನ್ನು ನದೆಸಿಕೊ೦ಡು ಹೊಗುವುದು ಅಷ್ಟು ಸುಲಭವಲ್ಲ. ಹೆತ್ತವರಿಗೆ ಅದೊ೦ದು ಸವಾಲು.
ತಿ೦ಡಿ-ಊಟ ಮಾಡಿಸುವಾಗ, ಸ್ನಾನ ಮಾದಿಸುವಾಗ, ನಿದ್ರೆ ಮಾದಿಸುವಾಗ ಎಲ್ಲ ಸಮಯದಲ್ಲು ಹಟ ಮಾಡುವುದು ಅವರ ವಾಡಿಕೆ.
ಆಗ ಅಜ್ಜಿಯೋ, ಅಮ್ಮನೋ ಕತೆಗಳನ್ನು ಹೇಳುತ್ತ ಮನಸನ್ನು ಬದಲಾಯಿಸಿ ನಮ್ಮ ದಾರಿಗೆ ತರಲು ಹೆಣಗಾಡುತ್ತಾರೆ.
ತಮಾಷೆ ಎ೦ದರೆ ರಾತ್ರಿ ಆದದ್ದು ಅರಿವಿರದೆ ಆಡುತ್ತ ಕುಳಿತಿರುತ್ತವೆ, ಆಗ ನಾವೇ ರಾತ್ರಿ ಆಯಿತು ನಿದ್ರೆ ಮಾಡಬೇಕು, ನಾಳೆಆಡುವ೦ತೆ ಎ೦ದು ಕತೆಯನ್ನು ಹೇಳುತ್ತ ಮಲಗಿಸಬೇಕು.
"ಚ೦ದಮಾಮ ಕತೆಗಳು", "ಅಮರ ಚಿತ್ರ ಕಥಾ" ದಿನಕ್ಕೊ೦ದು ಕತೆಗಳು, ಹುಟ್ಟಿಕೊ೦ಡಿದ್ದೇ ಈ ಮಕ್ಕಳಿ೦ದ...
ಹಾಗೆ ನಾನು ಕತೆ ಬರೆದು ಕಲ್ಪನೆಯ ಕತೆಗೆ ಜೀವ ನೀಡುವ ಪ್ರಯತ್ನ ಮಾಡಿದೆ.
ನನ್ನ ಮಗುವಿಗೆ ಪ್ರಾಣಿಗಳೆ೦ದರೆ ಪ್ರೀತಿ. ಹಾಗಾಗಿ ಎಲ್ಲ ಪ್ರಾಣಿಗಳಲ್ಲಿ ಸ್ನೇಹ ಬೆಳೆಸಿ ಕತೆ ಹೇಳಲು ಶುರು ಮಾಡಿದೆ..
ಹಾಗೆ ಅವು ಮರೆತು ಹೋಗಬಾರದೆ೦ದು ಬರೆಯಲು ಶುರು ಮಾಡಿದೆ. ನನ್ನ ಬ್ಲಾಗ್ ನಲ್ಲಿ ಸೇವ್ ಆಗಿರುತ್ತೆ..


ದನ್ಯವಾದಗಳು.

PHOTO SOURCE : from my gallery