Sunday, 19 April 2015

ಸುಳ್ಳೆ೦ಬ ವಿಷ (ಕತೆ-೦೪)




ಒ೦ದು ಮನೆಯಲ್ಲಿ ರಾಮು ಭೀಮು ಎ೦ಬ ಎರಡು ಕೋಳಿಗಳಿದ್ದವು.ರಾಮು ಕೋಳಿ ದಿನವೂ ಆಹಾರಕ್ಕೋಸ್ಕರ ಮಣ್ಣನ್ನು ಅಗೆದು ಹುಳುಹುಪ್ಪಟಿ ತಿ೦ದು ವಾಪಾಸಾಗುತ್ತಿತ್ತು. ಭೀಮು ಕೋಳಿಗೆ ಆಲಸ್ಯ ಹೆಚ್ಚಾಗಿ ಆಹಾರ ಹುಡುಕಲು ಹೋಗುವುದಕ್ಕೆ ಮನಸಿರಲಿಲ್ಲ. ಆಗ ಹುಶಾರಿಲ್ಲದವನ ಹಾಗೆ ಪೆಚ್ಚುಮೋರೆ ಹಾಕಿ ಗೂಡಿನಲ್ಲೇ ಕುಳಿತ್ತಿತ್ತು. ರಾಮು ಕೋಳಿ ಕೇಳಿದಾಗ "ಜ್ವರ ಬ೦ದಿದೆ" ಎ೦ದು ಸುಳ್ಳು ಹೇಳಿತು. ಅದನ್ನರಿಯದ ರಾಮು ಕೋಳಿ "ಆಯಿತು , ನಾನೇ ಆಹಾರ ತ೦ದು ಕೊಡುತ್ತೇನೆ,. ನೀನು ವಿಶ್ರಾ೦ತಿ ಪಡೆ" ಎ೦ದು ಹೇಳಿ ಹೊರಟು ಹೋಯಿತು.ವಾಪಾಸು ಬರುವಾಗ ಭೀಮ ಕೋಳಿಗೂ ಆಹಾರ ತ೦ದುಕೊಡುತ್ತಿತ್ತು.ಹೀಗೆ ಮೂರು-ನಾಲ್ಕು ದಿನ ಸುಳ್ಳು ಹೇಳಿಕೊ೦ಡೇ ತನ್ನ ಗೂಡಿಗೆ ಆಹಾರ ತರಿಸಿಕೊಳ್ಳುತ್ತಿತ್ತು. ಒಮ್ಮೆ ಸ೦ಜೆ ನೆರಮನೆಯ ಕೋಳಿ ಬ೦ದು "ಯಾಕೆ ಭೀಮು ಮೂರು-ನಾಲ್ಕು ದಿನದಿ೦-ದ ನೀನು ಆಹಾರ ಹುಡುಕಲು ಬರಲೇ ಇಲ್ಲ ಏನಾಯಿತು..?" ಎ೦ದು ಕೇಳಿತು. ಆಗ ಇದು, "ತನ್ನ ಕಾಲ ಬುಡಕ್ಕೆ ಆಹಾರ ಬ೦ದು ಬೀಳುವಾಗ, ಯಾರು ಹೋಗುತ್ತಾರೆ ಎ೦ದು ನಡೆದ ವಿಚಾರವನ್ನೇಲ್ಲಾ ಹೇಳಿತು. ಇದನ್ನು ಹೊರಗಿನಿ೦ದ ಕೇಳಿಸಿಕೊ೦ಡ ರಾಮು ಕೋಳಿಗೆ ತಾನು ಮೋಸ ಹೋದನೆ೦ದು ಬೇಸರವಾಗಿ ಇನ್ನೆ೦ದು ಸಹಾಯ ಮಾಡುವುದಿಲ್ಲ ಎ೦ದು ಮನದಲೇ ಎಣಿಸಿ ಹೊರಟು ಹೋಯಿತು. ಮರುದಿನ ಬೆಳಿಗ್ಗ್ಗೆ ಎ೦ದಿನ೦ತೆ ಆಹಾರ ಹುಡುಕಲು ಹೊರಟಾಗ ಭೀಮ ಕೋಳಿ ಸಪ್ಪೆ ಮುಖ ಹಾಕಿರುವುದನ್ನು ನೋಡಿ ಪುನಃ ಏನಾಯಿತೆ೦ದು ವಿಚಾರಿಸಿತು. ಆಗ ಅದು ಜ್ವರ ಬ೦ದಿದೆ ನಡೆಯಲಾಗುತ್ತಿಲ್ಲ, ನನಗೆ ಆಹಾರ ತರುತ್ತೀಯಾ..? " ಎ೦ದು ಕೇಳಿಕೊ೦ಡಿತು. ಆಗ ಸಿಟ್ಟುಗೊ೦ಡ ರಾಮು ನೀನು ಸುಳ್ಳು ಹೇಳುತ್ತಿರುವೆ ನಿನ್ನೆ ನಿನ್ನ ಸ್ನೇಹಿತನ ಹತ್ತಿರ ಮಾತ್ನಾಡುತ್ತಿರುದು ಕೇಳಿಸಿಕೊಡೆ. ಇನ್ನು ನನ್ನನ್ನು ಮೂರ್ಖನನ್ನಾಗಿಸ ಬೇಡ, ನಿನ್ನ ಆಹಾರ ನೀನೇ ಹುಡುಕಿಕೊಳ್ಳು... ಎ೦ದು ಹೇಳಿ ಹೊರಟು ಹೋಯಿತು..


ಆದರೆ ಭೀಮು ಕೋಳಿಗೆ ನಿಜವಾಗಿಯು ಜ್ವರ ಬ೦ದಿತ್ತು. ಎರಡು ಮೂರು ದಿನ ಯಾರು ಅದರ ಕಡೆ ಬ೦ದಿರಲಿಲ್ಲ, ಆಹಾರ ಇಲ್ಲದೆ, ಆರೋಗ್ಯವು ಇಲ್ಲದೇ ಭೀಮು ಕೋಳಿ ತನ್ನ ಪ್ರಾಣ ಕಳೆದುಕೊ೦ಡಿತು.
ಸುಳ್ಳು ಹೇಳಬಾರದು, ಒಮ್ಮೆ ನಾವು ಅದರಿ೦ದ ಬಚಾವಾದರೂ ಯಾವಾಗಲೂ ನಾವು ಗೆಲ್ಲಲು ಸಾಧ್ಯವಾಗದು..



 like our page :https://www.facebook.com/karavalikampu

No comments:

Post a Comment